ಬರ್ಷೆ, ಜೋವಾನಿ 
	1783-1851. ಇಟಲಿಯ ಸಾಹಿತ್ಯದಲ್ಲಿ ರೊಮಾಂಟಿಕ್ ಚಳವಳಿಯನ್ನೂ ಆರಂಭಿಸಿದ ಕವಿ; ದೇಶಭಕ್ತ. ಇಟಲಿಯ ಸಾಹಿತ್ಯ ಮದಾಂದ ಸ್ತೇಲ್ ಎಂಬ ಫ್ರೆಂಚ್ ಲೇಖಕಿಯಿಂದ ಸ್ಪೂರ್ತಿ ಪಡೆಯಬೇಕು. ಜರ್ಮನಿಯ ರೊಮಾಂಟಿಕ್ ಚಳುವಳಿಯ ದಾರಿಯಲ್ಲಿ ನಡೆಯಬೇಕು ಎಂಬುದೇ ಇವನ ವಾದ. ಹುಟ್ಟಿದ್ದು ಮಿಲಾನಿನಲ್ಲಿ ರಾಜಕೀಯ ಕಾರಣಗಳಿಂದ ದೇಶಭ್ರಷ್ಟನಾಗಿ ಇಂಗ್ಲೆಂಡ್, ಫ್ರಾನ್ಸ್ ಮತ್ತು ಜರ್ಮನಿಗಳಲ್ಲಿದ್ದ (1821-47). ಮ್ಯಾನಿಫೆಸ್ಡೊ ಆಫ್ ದಿ ರೊಮಾಂಟಿಕ್ ಪೊಯೆಟ್ರಿ ಇನ್ ಇಟಲಿ (1816) ಎಂಬುದು ಇವನ ಮುಖ್ಯ ಕೃತಿ ಇದಲ್ಲದೆ ಈತ ರಾಜಕೀಯ ಹಾಗೂ ರಾಷ್ಟ್ರಪ್ರೇಮ ವಸ್ತುಗಳನ್ನುಳ್ಳ ಕವಿತೆಗಳನ್ನೂ ಕಥನಕವನಗಳನ್ನೂ ಬರೆದಿದ್ದಾನೆ.
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ